ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ ನಿಮ್ಮ ಮುಂದೆ
ಬೇಕಾಗುವ ಸಾಮಾಗ್ರಿಗಳು
ಬೆಳ್ಳುಳ್ಳಿ ಎಸಳುಗಳು - ಹನ್ನೆರಡು ಎಸಳುಗಳು (ಇದು ಎಸಳುಗಳ ಗಾತ್ರದ ಮೇಲೆ ಬದಲಾಗುತ್ತದೆ)
ಧನಿಯ - ಎರಡು ಟೀ ಚಮಚ
ಮೆಂತ್ಯ ಕಾಳು -ಎರಡು ಟೀ ಚಮಚ
ಜೀರಿಗೆ - ಒಂದು ಟೀ ಚಮಚ
ಲಿಂಬೆ ರಸ - ೧/೪ ಲೋಟ
ಅರಿಸಿನ ಪುಡಿ -ಒಂದು ಟೀ ಚಮಚ
ಮೆಣಸಿನ ಪುಡಿ - ಎರಡು ಟೀ ಚಮಚ
ಎಣ್ಣೆ - ಐದು ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ವಿಧಾನ
***
ಬೇಕಾಗುವ ಸಾಮಾಗ್ರಿಗಳು
ಬೆಳ್ಳುಳ್ಳಿ ಎಸಳುಗಳು - ಹನ್ನೆರಡು ಎಸಳುಗಳು (ಇದು ಎಸಳುಗಳ ಗಾತ್ರದ ಮೇಲೆ ಬದಲಾಗುತ್ತದೆ)
ಧನಿಯ - ಎರಡು ಟೀ ಚಮಚ
ಮೆಂತ್ಯ ಕಾಳು -ಎರಡು ಟೀ ಚಮಚ
ಜೀರಿಗೆ - ಒಂದು ಟೀ ಚಮಚ
ಲಿಂಬೆ ರಸ - ೧/೪ ಲೋಟ
ಅರಿಸಿನ ಪುಡಿ -ಒಂದು ಟೀ ಚಮಚ
ಮೆಣಸಿನ ಪುಡಿ - ಎರಡು ಟೀ ಚಮಚ
ಎಣ್ಣೆ - ಐದು ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ವಿಧಾನ
- ಮೊದಲಿಗೆ ಧನಿಯ, ಮೆಂತ್ಯ ಕಾಳು, ಜೀರಿಗೆಯನ್ನು ಒಂದು ಬಾಣಲೆಯಲ್ಲಿ ಸ್ವಲ್ಪ ಕಪ್ಪಗಾಗುವವರೆಗೆ ಹುರಿಯಿರಿ. ಇದನ್ನುಮಿಕ್ಸರ್ನಲ್ಲಿ ನೀರು ಹಾಕದೆ ಪುಡಿಯಾಗುವಂತೆ ರುಬ್ಬಿ ಒಂದೆಡೆ ಇರಿಸಿ.
- ಇನ್ನೊಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಅದು ಕಂದು ಬಣ್ಣಕ್ಕೆ ತಿರುಗುವತನಕ ಹುರಿಯಿರಿ.
- ಈಗ ಇದೇ ಬಾಣಲಿಗೆ ಬೀಸಿಟ್ಟ ಮಸಾಲೆ ಪುಡಿ, ಉಪ್ಪು, ಮೆಣಸಿನ ಪುಡಿ, ಅರಿಸಿನ ಪುಡಿ ಮತ್ತು ಲಿಂಬೆ ರಸ ಹಾಕಿ ಒಮ್ಮೆಕೈಯ್ಯಾಡಿಸಿ.
- ಚನ್ನಾಗಿ ಕೈಯ್ಯಾಡಿಸುತ್ತ, ಸ್ವಲ್ಪ ಮಂದ(ದಪ್ಪ) ಅಗುವಂತಾಗಿಸಿ.
- ಚೂರು ಚೂರು ಎಣ್ಣೆ ಸೇರಿಸುತ್ತಾ ಸ್ವಲ್ಪ ಹೊತ್ತು ಕುದಿಸಿ ಕೆಳಗಿಸಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ.
***